ನಿಮಗಾಗಿ ನಾವು


ಮಂಥನ- ನಮ್ಮ ಮನಸ್ಸುಗಳನ್ನು ಒಟ್ಟುಗೂಡಿಸಲು ತಯಾರಾದ ಸಮಾನ ಮನಸ್ಕರ ಒಕ್ಕೂಟ. ನಮ್ಮದೊಂದು ಸಣ್ಣ ಬಡಾವಣೆ. ನಮ್ಮ ಗುರುದತ್ತಾ ಬಡಾವಣೆ ಬನಶಂಕರಿ ಮೂರನೇ ಹಂತದಲ್ಲಿ ಹೊಸಕೆರೆಹಳ್ಳಿ ಪಕ್ಕದಲ್ಲಿದೆ. ಸುತ್ತಲೂ ರಮ್ಯ ಮನೋಹರವಾದ ಪ್ರಸಿದ್ದ ತಾಣಗಳು ಪಶ್ಚಿಮಕ್ಕೆ ಹನುಮಗಿರಿ ಬೆಟ್ಟ (ಈಗ ಇಲ್ಲಿ ಟಾಟಾ ಸಂಸ್ಥೆಯವರ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದೆ) ಉತ್ತರದಲ್ಲಿ ಪ್ರಸಿದ್ದ ದತ್ತಾತ್ರೇಯ ದೇವಸ್ಥಾನವಿದೆ. ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಉದ್ಯಮಿ ಎಮ್. ವಿ. ಪ್ರಸಾದ್ ಬಾಬುರವರ ದೂರದೃಷ್ಟಿಯ ಫಲವೇ ನಮ್ಮ ಗುರುದತ್ತಾ ಬಡಾವಣೆಕಬಡ್ಡಿ ಬಾಬು ಲೇಔಟ್ ಎಂದೇ ಪ್ರಸಿದ್ದಿ. ನಮ್ಮ ಬಡಾವಣೆ ತಪೋಭೂಮಿ. ಕನ್ನಡದ ಪ್ರಖ್ಯಾತ ಲೇಖಕ, ತತ್ವಜ್ಞಾನಿ ದೇವುಡು ಅವರ ಆಸ್ತಿ. ನಂತರದ ದಿನಗಳಲ್ಲಿ ದತ್ತಾತ್ರೇಯ ದೇವಾಲಯಕ್ಕೆ ಸೇರಿ ಈಗ ಗುರುದತ್ತಾ ಬಡಾವಣೆಯಾಗಿದೆ.  ಪಟ್ಟಣ ಪ್ರದೇಶದ ಜನರ ಚಲನಶೀಲ ಬದುಕಿನಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವುದೇ ಕ್ಲಿಷ್ಠಕರ ಕೆಲಸ ಎಂದುಕೊಂಡು ಪ್ರಾರಂಭ ಮಾಡಿದಾಗ ಸಿಕ್ಕಿದ್ದು ತುಂಬು ಮನಸ್ಸಿನ, ಉತ್ಸಾಹಿ ಜನರ ೧೫ ಕುಟುಂಬಗಳು. ಈಗ ಇದು ೨೫ಕ್ಕೆ ಏರಿದೆ.
ಪ್ರತಿ ತಿಂಗಳು, ಒಂದೊಂದು ಮನೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತೀರ್ಮಾನಿಸಿದ ತಕ್ಷಣ ಬುಕ್ ಆಗಿದ್ದು ಮುಂದಿನ ತಿಂಗಳಿಗೆ ಎಂದು ಹೇಳಲೇ ಬೇಕಾಗುತ್ತದೆ. ಅದರಂತೆ ಕಾರ್ಯಕ್ರಮಗಳು ನಡೆಯುತ್ತಿದೆ. ದಿನಂಪ್ರತಿ ಬೇಡಿಕೆಗಳು ಹೆಚ್ಚುತ್ತಿವೆ.
ಪ್ರತಿ ತಿಂಗಳೂ ಕಾರ್ಯಕ್ರಮದಲ್ಲಿ ಹಾಡು, ವಿಷಯ ಮಂಡನೆ, ಚರ್ಚೆ, ಸಂವಾದ ಎಲ್ಲವೂ ನೆಡೆದು ಪ್ರಾಯೋಜಿತ. ಕುಟುಂಬದವರ ಆತಿಥ್ಯದೊಂದಿಗೆ ಎಲ್ಲರೂ ಸಿಹಿಯಾದ ಹಲವಾರು ವಿಷಯಗಳನ್ನು ತಮ್ಮದಾಗಿಸಿಕೊಂಡು ಮೆಲುಕು ಹಾಕಿ ನಿರ್ಗಮಿಸುತ್ತೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ